ಪದಕ ಮಾತ್ರವಲ್ಲ, ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದೀರಿ! ಪ್ಯಾರಾ ಏಷ್ಯನ್ ಗೇಮ್ಸ್ ಸಾಧಕರನ್ನು ಕೊಂಡಾಡಿದ ಪ್ರಧಾನಿ ಮೋದಿ | Narendra Modi
ನವದೆಹಲಿ: ಈ ವರ್ಷ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಐತಿಹಾಸಿಕ ಸಾಧನೆಗೈದ ದೇಶದ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಗುರುವಾರ ಅಭಿನಂದಿಸಿದರು. ಇವರೆಲ್ಲಾ ಕೇವಲ ಪದಕಗಳನ್ನು ಮಾತ್ರ ಗೆದ್ದಿಲ್ಲ, ಬದಲಾಗಿ ತಮ್ಮ ಅದಮ್ಯ ದೃಢಸಂಕಲ್ಪ, ಧೈರ್ಯ ಮತ್ತು ಶ್ರಮದ ಮೂಲಕ ಕೋಟ್ಯಂತರ ದೇಶವಾಸಿಗಳ ಹೃದಯಗಳನ್ನು ಗೆದ್ದಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು.
2 free AI summaries left today
0 comments